ಗುರುವಾರ, ಜುಲೈ 23, 2009

ಕಡಲ ಕಿನಾರೆಯ ಚಿತ್ತಾರದ ಬದುಕು...

ಒಂದಾದ ಮೇಲೊಂದು
ಬಂದೆರಗುವ ಸಮುದ್ರದ
ಉಬ್ಬರಗಳ ಏರಿಳಿತ...

ಅದರೆಡೆಗೆ ಸಾಗಿಹೋಗುವ
ಬಂಡೆಗಳು,
ಸರ್ರನೆ ನೀರು ಸೀಳುವ ಸಂಗೀತ...

ಅಲೆಅಲೆಯಾಗಿ ಹೊರಹೊಮ್ಮಿ
ಕಿವಿಗೆ ಮೆಲ್ಲನೆ ಸೋಕಿ
ಮುದಗೊಳಿಸುವ ಆಲಾಪನೆ...

ತಣ್ಣಗಿನ ಗಾಳಿಯಲ್ಲಿ
ಕೊಂಚವೇ ಚಳಿ ಹುಟ್ಟಿಸುವ
ಕುಳಿರ್ಗಾಳಿ...

ಅಷ್ಟು ದೂರದಲ್ಲಿ
ನೀರಮೇಲೆ ಹೊಯ್ದಾಡುತ್ತ
ಹೋಗುವ ಹಾಯಿಗಳು...

ಅಷ್ಟು ದೂರದಲಿ ಕಾಣದ
ತೀರದ ವರ್ತುಲದ ಹಿಂದೆ
ಮರೆಯಾಗಿ ಬಿಡುವ ಆ ಪರಿ...


ಸಮುದ್ರ ದಂಡೆಯಲಿ ಅಲ್ಲದೆ
ಇನ್ನೆಲ್ಲಿ ದೊರಕೀತು ಆ ಚಿತ್ತಾರದ ಬದುಕು....

3 ಕಾಮೆಂಟ್‌ಗಳು: