ಬುಧವಾರ, ಅಕ್ಟೋಬರ್ 7, 2009

ನಿನ್ನೊಡನೆ ನಾನು...

ಗೆಳತಿ, ಕಡಲ ಕಿನಾರೆಯಲಿ
ಪ್ರೀತಿಯ ನಾವೆಯಾಗಿ ಕುಳಿತಿರುವೆ,
ನೀ ಬಂದು ನಿನ್ನ ಅಗೋಚರ
ಅಂಥರಾಳಕೆ ಕರೆದೊಯ್ಯುವೆಯ...?

ಗುರುವಾರ, ಜುಲೈ 23, 2009

ಕಡಲ ಕಿನಾರೆಯ ಚಿತ್ತಾರದ ಬದುಕು...

ಒಂದಾದ ಮೇಲೊಂದು
ಬಂದೆರಗುವ ಸಮುದ್ರದ
ಉಬ್ಬರಗಳ ಏರಿಳಿತ...

ಅದರೆಡೆಗೆ ಸಾಗಿಹೋಗುವ
ಬಂಡೆಗಳು,
ಸರ್ರನೆ ನೀರು ಸೀಳುವ ಸಂಗೀತ...

ಅಲೆಅಲೆಯಾಗಿ ಹೊರಹೊಮ್ಮಿ
ಕಿವಿಗೆ ಮೆಲ್ಲನೆ ಸೋಕಿ
ಮುದಗೊಳಿಸುವ ಆಲಾಪನೆ...

ತಣ್ಣಗಿನ ಗಾಳಿಯಲ್ಲಿ
ಕೊಂಚವೇ ಚಳಿ ಹುಟ್ಟಿಸುವ
ಕುಳಿರ್ಗಾಳಿ...

ಅಷ್ಟು ದೂರದಲ್ಲಿ
ನೀರಮೇಲೆ ಹೊಯ್ದಾಡುತ್ತ
ಹೋಗುವ ಹಾಯಿಗಳು...

ಅಷ್ಟು ದೂರದಲಿ ಕಾಣದ
ತೀರದ ವರ್ತುಲದ ಹಿಂದೆ
ಮರೆಯಾಗಿ ಬಿಡುವ ಆ ಪರಿ...


ಸಮುದ್ರ ದಂಡೆಯಲಿ ಅಲ್ಲದೆ
ಇನ್ನೆಲ್ಲಿ ದೊರಕೀತು ಆ ಚಿತ್ತಾರದ ಬದುಕು....

ಭಾನುವಾರ, ಜುಲೈ 19, 2009

ಭರವಸೆಯಿಲ್ಲದ ಬದುಕು...

ಹುಟ್ಟಿನ ದುಂಬಾಲು ಹಿಡಿದು

ಹೊರಟೆ, ಅದು

ಹೊಲಸು ಮಾನವನಾಗಿಸಿತು...


ಪ್ರೀತಿ ವಾತ್ಸಲ್ಯಗಳನು

ಬಯಸಿದೆ, ಅದು

ಕೇವಲ ಸ್ವಾರ್ಥವೆಂದು ಅರಿವಾಯಿತು...


ಪ್ರೇಮದ ಅಮಲಿಗೆ

ಬಿದ್ದೆ, ಅವಳು

ಒಂದು ಕುರುವು ಬಿಡದೆ ಹೊರಟಳು...


ಬದುಕಿನ ಜಾಡ ಹಿಡಿದು

ಹೊರಟೆ, ಕವಲೊಡೆದ

ದಾರಿಗಳ ನಡುವೆ ಗೊಂದಲಗಳಿಗೀಡಾದೆ...

ನನ್ನವಳ ನೆನಪು...

ನನ್ನ ಕವಿತೆಯ ಸಾಲುಗಳು ಮುಗಿಯುವುದರೊಳಗೆ

ಹರಿದ ನೆತ್ತರನ ನೆನಪು ಕಾಡಿಸಿತು...

ಇಳೆಯನ್ನೊಮ್ಮೆ ದಿಟ್ಟಿಸಿ ನೋಡಿದರೆ,

ಚಂದಿರನ ಮೊಗದಲ್ಲಿ ನನ್ನವಳ ನಗುವು

ಮೂಡಿಸಿತು ನನ್ನಲ್ಲಿ ದಿವ್ಯಮೌನವನು...